ನಾಳೆ ಧರ್ಮಸ್ಥಳ ಭಕ್ತಾಭಿಮಾನಿಗಳಿಂದ ಪ್ರತಿಭಟನೆ
ಕುಂದಗೋಳ :ತಾಲೂಕಿನ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಪರಮಪೂಜ್ಯ ಖಾವಂದರಿಗೆ ಕಳಂಕ ತರಲು ಒಳ ಸಂಚು ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಕ್ತಾಭಿಮಾನಿಗಳಿಂದ ದಿನಾಂಕ 25- 8 – 2025 ರಂದು ಮುಂಜಾನೆ 10 ಗಂಟೆಗೆ ಪಟ್ಟಣದಲ್ಲಿ ಭಾರಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭಕ್ತಾಭಿಮಾನಿ ಶಿವಾನಂದ ಬೆಂತೂರ ತಿಳಿಸಿದ್ದಾರೆ….
ಮಳೆಯಿಂದ ಹಾನಿಯಾದ ರೈತರಿಗೆ ಕೂಡಲೆ ಸರ್ಕಾರ ಪರಿಹಾರ ನೀಡಬೇಕು ಕರವೇ ಘಟಕ ಆಗ್ರಹ
ಕುಂದಗೋಳ : ಅತಿವೃಷ್ಟಿ ಮಳೆಯಿಂದಾಗಿ ತಾಲೂಕಿನಲ್ಲಿ ಮುಂಗಾರಿನ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಕರ್ನಾಟಕರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಒತ್ತಾಯಿಸಿದರು.ಪಟ್ಟಣದ ತಹಶೀಲ್ದಾರ ಆವರಣದಲ್ಲಿ ಗುರುವಾರ ಕರವೇ ಘಟಕದಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಿರಸ್ತಾರ ಶಾನಬಾಳ ಅವರಿಗೆ ಮನವಿ ಸಲ್ಲಿಸಿ,ಮಾತನಾಡಿ ವಿಮಾ ಕಂಪನಿಯವರು ಕುಂದಗೋಳ ಹೋಬಳಿಗೆ ಬೆಳೆ ವಿಮೆ ಹಣ ಮಂಜೂರು ಮಾಡಿದ್ದು ಆದರೆ ಸಂಶಿ ಹೋಬಳಿಗೆ ಬೆಳೆ ವಿಮೆ ಹಣ ಮಂಜೂರು ಮಾಡದೆ ರೈತರಿಗೆ ತಾರತಮ್ಯ ಎಸಿಗಿದ್ದು ತಾಲೂಕಿನಲ್ಲಿ ಬಹುತೇಕ…
ಕುಂದಗೋಳ ತಾಲೂಕಿನ ಯರಗುಪ್ಪಿ-ಇಂಗಳಹಳ್ಳಿ ಮಾರ್ಗದ ರೈತರ ಜಮೀನಿಲ್ಲಿ ಹಾಳಾದ ಹೆಸರು ಬೆಳೆ ಹಾನಿಯನ್ನು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿಚ ಸಂತೋಷ ಲಾಡ್ ಪರಿಶಿಲಿಸಿದರು
ಕುಂದಗೋಳ : ಅತಿವೃಷ್ಟಿಯಿಂದಾಗಿ ಮುಂಗಾರಿನ ಬೆಳೆಗಳಾದ ಹೆಸರು, ಸೋಯಾ ಇನ್ನಿತರ ಬೆಳೆಗಳು ಹಾಳಾಗಿದ್ದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿಚ ಸಂತೋಷ ಲಾಡ್ ಶನಿವಾರ ಹೊಲಗಳಿಗೆ ತೆರಳಿ ವೀಕ್ಷಿಸಿದರು.ತಾಲೂಕಿನ ಯರಗುಪ್ಪಿ-ಇಂಗಳಹಳ್ಳಿ ಮಾರ್ಗದ ರೈತರ ಜಮೀನಿಲ್ಲಿ ಹಾಳಾದ ಹೆಸರು ಬೆಳೆ ಪರಿಶಿಲಿಸಿ, ರಸ್ತೆಯಲ್ಲಿ ಕಟಾವ ಮಾಡಿ ಒಕ್ಕಲು ಮಾಡುತ್ತಿರು ಹೆಸರು ಕಾಳನ್ನು ಪರಿಶಿಲಿಸಿದರು.ರೈತರು ತಮ್ಮ ಅಳಲನ್ನು ಸಚಿವರ ಗಮನಕ್ಕೆ ತಂದರು. ಸಚಿವ ಲಾಡ್ ಅವರು ಮಾತನಾಡಿ ಸರ್ಕಾರದ ಪರವಾಗಿ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿ, ಅಧಿಕಾರಿಗಳಿಗೆ…
ಸಮರ್ಪಕ ಬೆಳೆ ವಿಮೆಯನ್ನು ವಿಮಾ ಕಂಪನಿಯವರು ರೈತರಿಗೆ ನೀಡಬೇಕು
ಕುಂದಗೋಳ: ಸಮರ್ಪಕವಾಗಿ ಬೆಳೆ ವಿಮೆಯನ್ನು ವಿಮಾ ಕಂಪನಿಯವರು ರೈತರಿಗೆ ನೀಡದೆ ಇರುವುದರಿಂದ ಆತ್ಮಹತ್ಯೆಗೆ ಶರಾಣಾಗುತ್ತಿದ್ದಾರೆ, ಈಗ ಅತೀವೃಷ್ಟಿಯಿಂದ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೆ ಬೆಲೆ ವಿಮೆ ಬೆಳೆ ಪರಿಹಾರ ನೀಡಬೇಕೆಂದು ತಾಲೂಕಿನ ಬರದ್ವಾಡ ಗ್ರಾಮದ ಯುವಕರು ತಹಶೀಲ್ದಾರ ಕಚೇರಿಯ ಶಿರಸ್ಥಾರ ಶಾನಬಾಳರವರಿಗೆ ಶುಕ್ರುವಾರ ಮನವಿ ಸಲ್ಲಿಸಿ ಆಗ್ರಹಿಸಿದರು.ಮುತ್ತು ಮಾಡಳ್ಳಿ ಮಾತನಾಡಿ ಸರಕಾರವು ರೈತರಿಗೆ ಬೆಳೆ ಪರಿಹಾರ ಎಕರೆಗೆ 1750 ರೂಪಾಯಿ ನೀಡುತ್ತಿದ್ದು ರೈತರು 1 ಎಕರೆಗೆ ಸುಮಾರು 50 ಸಾವಿರ ರೂಪಾಯಿ ಖಚರ್ು ಮಾಡುತ್ತಾರೆ ರೈತರಿಗೆ…
ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಲ್ಲಕಂಬ ಸ್ಪರ್ಧೆ ಸಂಪನ್ನ; ಮೂರು ವಿನ್ನರ್ ಟ್ರೋಫಿ ಬಾಚಿದ ಹರ್ಲಾಪುರ
. ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಲ್ಲಕಂಬ ಮತ್ತು ಹಗ್ಗದ ಮಲ್ಲಕಂಬ ಸ್ಪರ್ಧೆಯು ದಿನಾಂಕ 7.8.2025ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಗೋಳ, ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರ,ಗ್ರಾಮದ ಗುರು ಹಿರಿಯರ ಹಾಗೂ ಹಳೆ ಕ್ರೀಡಾಪಟುಗಳ ಸಹಕಾರದಿಂದ ಈ ಸ್ಪರ್ಧೆ ನಡೆಯಿತು. ಟ್ರೋಪಿಗಳನ್ನು ರಾಷ್ಟ್ರೀಯ ಮಲ್ಲಕಂಬ ಪಟು, ಯೋಧರಾದ ರವಿ…
ಇಂದಿನ ತಾಂತ್ರಿಕ ಯುಗದಲ್ಲಿ ಪರಿಸರ ಅವನತಿಯತ್ತ ಸಾಗುತ್ತಿದ್ದು, ನಾವೆಲ್ಲರೂ ಪರಿಸರವನ್ನ ಸಂರಕ್ಷಿಸಬೇಕಾಗಿದೆ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಜುಟ್ಟಲ ಹೇಳಿದರು. ಕುಂದಗೋಳ : ಇಂದಿನ ತಾಂತ್ರಿಕ ಯುಗದಲ್ಲಿ ಪರಿಸರ ಅವನತಿಯತ್ತ ಸಾಗುತ್ತಿದ್ದು, ನಾವೆಲ್ಲರೂ ಪರಿಸರವನ್ನ ಸಂರಕ್ಷಿಸಿ ಮುಂದಿನ ಪೀಳಿಗೆಗೆ ನಿರ್ಮಲವಾದ ಜೀವನ ಮತ್ತು ಆರೋಗ್ಯ ನೀಡುವುದು ಅನಿವಾರ್ಯವಾಗಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಶೇಖರ ಜುಟ್ಟಲ ಹೇಳಿದರು.ಅವರು ತಾಲೂಕಿನ ಕಮಡೊಳ್ಳಿ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನರಾಷ್ಟ್ರೀಯಲ್ಲಿ ಜರುಗಿದ ಸೇವಾ ಯೋಜನೆ ಘಟಕ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ನೆಡುವ…
ನವಲಗುಂದ ಕುಂದಗೋಳ ಬನವಾಸಿ ರಾಜ್ಯ ಹೆದ್ದಾರಿ ಮೇಲೆ ಗಿಡ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತ
ಕುಂದಗೋಳ : ಪಟ್ಟಣದ ಸಮೀಪ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಶನಿವಾರ ಬ್ರಹತ್ ಮರ ಬಿದ್ದು ಕೆಲವು ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಆದ ಘಟನೆ ಜರಗಿತು.ಸುಮಾರು ಮಧ್ಯಾಹ್ನ 3 ಇಂದ 5 ಗಂಟೆ ವರೆಗೆ ಕುಂದಗೋಳ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಬಂದಆಗಿ ಪ್ರಯಾಣಿಕರಿಗೆ ತೊಂದರೆ ಆಯಿತು ಯಾವುದೇ ಪ್ರಾಣ ಅಪಾಯ ಆಗಿಲ್ಲ ಬೇರೆ ಬೇರೆ ಊರುಗಳಿಗೆ ತೆರಳುವ ವಾಹನ ಸಂಚಾರ ಅಡತನೆ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ…
