
.
ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಲ್ಲಕಂಬ ಮತ್ತು ಹಗ್ಗದ ಮಲ್ಲಕಂಬ ಸ್ಪರ್ಧೆಯು ದಿನಾಂಕ 7.8.2025ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಗೋಳ, ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರ,
ಗ್ರಾಮದ ಗುರು ಹಿರಿಯರ ಹಾಗೂ ಹಳೆ ಕ್ರೀಡಾಪಟುಗಳ ಸಹಕಾರದಿಂದ ಈ ಸ್ಪರ್ಧೆ ನಡೆಯಿತು.
ಟ್ರೋಪಿಗಳನ್ನು ರಾಷ್ಟ್ರೀಯ ಮಲ್ಲಕಂಬ ಪಟು, ಯೋಧರಾದ ರವಿ ಓಲೆಕಾರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎನ್ ಓ ಹಡಗಲಿ, ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಎಚ್ ಆರ್ ಕತ್ತಿ, ಪ್ರಗತಿಪರ ರೈತರಾದ ಅಬ್ದುಲ್ ಸಾಬ್ ನದಾಫ್ ಇವರು ಕೊಡುಗೆಯಾಗಿ ನೀಡಿದ್ದರು.
14 ವರ್ಷದೊಳಗಿನ ಪ್ರಾಥಮಿಕ ವಿಭಾಗದ ಬಾಲಕಿಯರಲ್ಲಿ ದೀಪ ದೊಡ್ಡಮನಿ ಪ್ರಥಮ ಸ್ಥಾನ, ಸುಶ್ಮಿತಾ ಕೌದಿಮಠ ದ್ವಿತೀಯ ಸ್ಥಾನ, ಪ್ರಿಯಾ ಅಂಗಡಿ ತೃತೀಯ ಸ್ಥಾನ, ಕೀರ್ತಿ ಹರಕುಣಿ ಚತುರ್ಥ ಸ್ಥಾನ ಪಡೆದುಕೊಂಡರೆ, 14 ವರ್ಷದೊಳಗಿನ ಪ್ರಾಥಮಿಕ ಬಾಲಕರಲ್ಲಿ ಶ್ರೀಶಾಂತ್ ಕಮ್ಮಾರ್ ಪ್ರಥಮ ಸ್ಥಾನ, ಮಣಿಕಂಠ ಮುಗಳಿ ದ್ವಿತೀಯ ಸ್ಥಾನ, ಸಾಗರ್ ತೃತೀಯ ಸ್ಥಾನ, ವಿಶ್ವಜ್ಞ ಕುಲಕರ್ಣಿ ಚತುರ್ಥ ಸ್ಥಾನ , 17 ವರ್ಷದೊಳಗಿನ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ಮುಗಳಿ ಪ್ರಥಮ ಸ್ಥಾನ ರತ್ನ ಶೋಗೋಟಿ ದ್ವಿತೀಯ ಸ್ಥಾನ ಅನ್ನಪೂರ್ಣತಸಿಲ್ದಾರ್ ತೃತೀಯ ಸ್ಥಾನ ಹೇಮ ಬಳೆಗಾರ ಚತುರ್ಥ ಸ್ಥಾನ ಪಡೆದುಕೊಂಡರು, 17 ವರ್ಷದೊಳಗಿನ ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ಉಮೇಶ್ ದೊಡ್ಡಮನಿ ಪ್ರಥಮ ಸ್ಥಾನ ,ಪಂಚಾಕ್ಷರಿ ಹಿರೇಮಠ್ ದ್ವಿತೀಯ ಸ್ಥಾನ, ಬಸವರಾಜ್ ಕಟ್ಟಿಮನಿ ತೃತೀಯ ಸ್ಥಾನ ,ಪ್ರೀತಮ್ ಸೂರುಣಗೆ ಚತುರ್ಥ ಸ್ಥಾನ ಪಡೆದುಕೊಂಡರು .
14 ವರ್ಷದೊಳಗಿನ ಬಾಲಕರು, 14 ವರ್ಷದೊಳಗಿನ ಬಾಲಕಿಯರು, 17 ವರ್ಷದೊಳಗಿನ ಬಾಲಕರ ಚಾಂಪಿಯನ್ ಟ್ರೋಪಿಯನ್ನ ಹರ್ಲಾಪುರ ಪಡೆದುಕೊಂಡರೆ , 17 ವರ್ಷದೊಳಗಿನ ಬಾಲಕಿಯರ ಚಾಂಪಿಯನ್ ಟ್ರೋಪಿಯನ್ನ ಶಿರುಗುಪ್ಪಿ ತಂಡವು ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ ಹರ್ಲಾಪುರ ಗ್ರಾಮದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಹಳೆಯ ಆಟಗಾರರಿಗೆ ಸನ್ಮಾನ ಮಾಡಲಾಯಿತು.
