

ಕುಂದಗೋಳ : ಅತಿವೃಷ್ಟಿಯಿಂದಾಗಿ ಮುಂಗಾರಿನ ಬೆಳೆಗಳಾದ ಹೆಸರು, ಸೋಯಾ ಇನ್ನಿತರ ಬೆಳೆಗಳು ಹಾಳಾಗಿದ್ದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿಚ ಸಂತೋಷ ಲಾಡ್ ಶನಿವಾರ ಹೊಲಗಳಿಗೆ ತೆರಳಿ ವೀಕ್ಷಿಸಿದರು.
ತಾಲೂಕಿನ ಯರಗುಪ್ಪಿ-ಇಂಗಳಹಳ್ಳಿ ಮಾರ್ಗದ ರೈತರ ಜಮೀನಿಲ್ಲಿ ಹಾಳಾದ ಹೆಸರು ಬೆಳೆ ಪರಿಶಿಲಿಸಿ, ರಸ್ತೆಯಲ್ಲಿ ಕಟಾವ ಮಾಡಿ ಒಕ್ಕಲು ಮಾಡುತ್ತಿರು ಹೆಸರು ಕಾಳನ್ನು ಪರಿಶಿಲಿಸಿದರು.
ರೈತರು ತಮ್ಮ ಅಳಲನ್ನು ಸಚಿವರ ಗಮನಕ್ಕೆ ತಂದರು. ಸಚಿವ ಲಾಡ್ ಅವರು ಮಾತನಾಡಿ ಸರ್ಕಾರದ ಪರವಾಗಿ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿ, ಅಧಿಕಾರಿಗಳಿಗೆ ಹಾನಿ ಅಂದಾಜು ಕಾರ್ಯವನ್ನು ತ್ವರಿತಗೊಳಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು.
ಹೆಸರು, ಈರುಳ್ಳಿ, ಬಳ್ಳೊಳ್ಳಿ, ಸೋಯಾಬೀನ್, ಇನ್ನಿತರ ಬೆಳೆಗಳಿಗೆ ಜಿಲ್ಲೆಗ ಅಂದಾಜು ಒಂದು ಲಕ್ಷ ಹೆಕ್ಟರಗೆ ಪರಿಹಾರ ದೊರೆಯಬಹುದು, ರೈತರ ಕಷ್ಟಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ನಂತರ ಶಾಸಕ ಎಮ್.ಆರ್.ಪಾಟೀಲ ಮಾಧ್ಯಮದವರಿಗೆ ಮಾತನಾಡಿ ತಾಲ್ಲೂಕಿನಲ್ಲಿ ಅಂದಾಜು ಸಂಪೂರ್ಣ ಹೆಸರು ಬೆಳೆ ಹಾಗೂ ಸೋಯಾ ಇನ್ನಿತರ ಬೆಳೆಗಳು ಹಾಳಾಗಿದ್ದು, ರೈತರಿಗೆ ಹಿಂಗಾರು ಬಿತ್ತನೆಗೂ ಕಷ್ಟವಾಗಿದ್ದು ಕೂಡಲೆ ಪರಿಹಾರ ನೀಡಬೇಕು, ಜಾಗೂ ಬೆಳೆ ವಿಮೆ ನಿಡಬೇಕೆಂದು ಹೇಳಿದರು. ಬೆಣ್ಷಿಹಳ್ಳ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ ಈಗಾಗಲೆ ಅದಿವೆಶನದಲ್ಲಿ ಮಾತನಾಡಿದ್ದು, ಡಿ.ಪಿ.ಆರ್ ತಯಾರಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದಿದ್ದಾರೆ, ಇದಕ್ಕೆ ನಮ್ಮ ಕೇಂದ್ರ ಸಚಿವ ಪ್ರಲ್ದಾದ ಜೋಶಿ ಅವರು ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ದೊರೆಯುವ ಭರವಸೆ ವ್ಯಕ್ತ ಪಡಿಸಿದರು
ವಿವಿಧ ರೈತ ಪರ ಸಂಘಟನೆಗಳು ಸಚಿವರಿಗೆ ಬೆಳೆ ಪರಿಹಾರ, ಬೆಳೆ ವಿಮೆ ನಿಡುವಂತೆ ಮನವಿ ಸಲ್ಲಿಸಿದರು.ಅನೇಕ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತಮಗಾದ ಬೆಳೆ ನಷ್ಟದ ಹೊಲದ ರಸ್ತೆ ಕುರಿತು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಕೋನರೆಡ್ಡಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ತಹಶೀಲ್ದಾರ್ ರಾಜು ಮಾವರಕರ, ತಾಪಂ ಇ ಓ ಜಗದೀಶ ಕಮ್ಮಾರ,ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ,ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಮಪ್ ಈ ಸಂದರ್ಭದಲ್ಲಿ ನವಲಗುಂದ ಶಾಸಕ ಕೋನರೆಡ್ಡಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ತಹಶೀಲ್ದಾರ್ ರಾಜು ಮಾವರಕರ, ತಾಪಂ ಇ ಓ ಜಗದೀಶ ಕಮ್ಮಾರ,ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ,,ತಾಲೂಕ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಅನೇಕ ರೈತರು ಗ್ರಾಮಸ್ಥರು ಇದ್ದರು.
