ಕುಂದಗೋಳ :
ತಾಲೂಕಿನ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಪರಮಪೂಜ್ಯ ಖಾವಂದರಿಗೆ ಕಳಂಕ ತರಲು ಒಳ ಸಂಚು ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಕ್ತಾಭಿಮಾನಿಗಳಿಂದ ದಿನಾಂಕ 25- 8 – 2025 ರಂದು ಮುಂಜಾನೆ 10 ಗಂಟೆಗೆ ಪಟ್ಟಣದಲ್ಲಿ ಭಾರಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭಕ್ತಾಭಿಮಾನಿ ಶಿವಾನಂದ ಬೆಂತೂರ ತಿಳಿಸಿದ್ದಾರೆ.
ಪಟ್ಟಣದ ಗಾಳಿಮರೆಮ್ಮನ ದೇವಸ್ಥಾನ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದೆ. ಅಲ್ಲಿ ಮೊದಲಿಗೆ ಜನಾಗ್ರಹ ಸಭೆಯನ್ನು ನಡೆಸಿ ನಂತರ ಮಾರ್ಕೆಟ್ ರಸ್ತೆಯ ಮೂಲಕ ಬೃಹತ್ ಜಾಥಾದೊಂದಿಗೆ ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ತಹಶೀಲ್ದಾರ ಸಮ್ಮುಖದಲ್ಲಿ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಮನವಿ ಸಲ್ಲಿಸಲಾಗುವುದು.
ಈ ಧರ್ಮಸ್ಥಳ ಭಕ್ತಾಭಿಮಾನಿಗಳಿಂದ ಜರುಗಲಿರುವ ಪ್ರತಿಭಟನೆಗೆ ಕುಂದಗೊಳ ತಾಲೂಕಿನ ರತ್ನ ಭಾರತರ ರೈತ ಸಂಘ, ಮೇಟಿ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ನಿಶಾನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ , ಪಟ್ಟಣದ ವ್ಯಾಪಾರಸ್ಥರ ಸಂಘ, ತಾಲೂಕು ದಲಿತ ಸಂಘರ್ಷ ಸಮಿತಿ, ತಾಲೂಕು ಅಂಜುಮನ್ ಸಂಸ್ಥೆ, ತಾಲೂಕಾ ಆದಿ ಜಂಬವ ಸಂಘ, ಹಾಗೂ ತಾಲೂಕು ನಾಗರಿಕ ಹಿತ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ.
ಪ್ರತಿಭಟನೆ ಧರ್ಮಸ್ಥಳದ ಭಕ್ತಾಭಿಮಾನಿಗಳಾದ ಶಿವಾನಂದ ಬೆಂತೂರ , ದೇವೇಂದ್ರಪ್ಪ ಕಾಗೆನವರ, ಕಲ್ಲಪ್ಪ ಹರಕುಣಿ, ಅಶೋಕ್ ಘೋರ್ಪಡೆ ಗಿರೀಶ ಗೌಡ ಪಾಟೀಲ, ಯಲ್ಲಪ್ಪ ಮುಳುಗುಂದ, ಬಸವರಾಜ್ ಶಿರಸಂಗಿ , ಬಸವರಾಜ್ ಯೋಗಪ್ಪನವರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ
