ಕುಂದಗೋಳ : ಅತಿವೃಷ್ಟಿ ಮಳೆಯಿಂದಾಗಿ ತಾಲೂಕಿನಲ್ಲಿ ಮುಂಗಾರಿನ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಕರ್ನಾಟಕ
ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ ಆವರಣದಲ್ಲಿ ಗುರುವಾರ ಕರವೇ ಘಟಕದಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಿರಸ್ತಾರ ಶಾನಬಾಳ ಅವರಿಗೆ ಮನವಿ ಸಲ್ಲಿಸಿ,ಮಾತನಾಡಿ ವಿಮಾ ಕಂಪನಿಯವರು ಕುಂದಗೋಳ ಹೋಬಳಿಗೆ ಬೆಳೆ ವಿಮೆ ಹಣ ಮಂಜೂರು ಮಾಡಿದ್ದು ಆದರೆ ಸಂಶಿ ಹೋಬಳಿಗೆ ಬೆಳೆ ವಿಮೆ ಹಣ ಮಂಜೂರು ಮಾಡದೆ ರೈತರಿಗೆ ತಾರತಮ್ಯ ಎಸಿಗಿದ್ದು ತಾಲೂಕಿನಲ್ಲಿ ಬಹುತೇಕ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು ಹೀಗಿದ್ದರೂ ಸಹ ವೀಮಾ ಕಂಪನಿಯವರು ತಾರತಮ್ಯ ಎಸಿಗಿರುವುದು ಕುರಿತು ಕಿಡಿ ಕಾರ್ದಿರಲ್ಲದೆ ರೈತರಿಗೆ ಕೂಡಲೆ ವಿಮೆಹಣ ಬಿಡುಗಡೆ ಮಾಡಬೇಕು, ಪ್ರತಿ ಹೆಕ್ಟರಿಗೆ 50,000 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕರವೇ ಉಪಾಧ್ಯಕ್ಷ ಅಡಿವೆಪ್ಪ ಹೆಬಸೂರ ಮಾತನಾಡಿ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿರುವಾಗಲೇ ರಾಜಕಾರಣಿಗಳು ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಕಿಂಚಿತ್ತು ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರಲ್ಲದೆ, ಮಳೆಯಿಂದಾಗಿ ತಾಲೂಕಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದು ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಹಿಡಿ ಮಣ್ಣು ಹಾಕದೇ ಇರುವುದರಿಂದ ರಸ್ತೆ ಮೇಲೆ ಸಂಚರಿಸಿದಂತಾಗಿದೆ, ಕೂಡಲೆ ಗುಂಡಿ ತುಂಬದಿದ್ದರೆ ಉಗ್ರವಾದ ಪ್ರತಿಭಟನೆಯ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ ಹಾದಿಮನಿ,ರವಿ ಶಿರಸಂಗಿ,
ಶ್ರೀಕಾಂತ ನಾಗರಹಳ್ಳಿ,ಅಶೋಕ ಸಂಶಿ, ಕಲಂದರ ಹಂಚಿನಾಳ, ಮಂಜುನಾಥ ಕಟ್ಟಿ ಮಂಜುನಾಥ ಪೂಜಾರ,ಮಂಜುನಾಥ ಮೇಲ್ಮಾಳಗಿ,ಬಸು ಮುಳ್ಳಳ್ಳಿ ಸೇರಿದಂತೆ ಅನೇಕರಿದ್ದರು.
ನಂತರ ಲೋಕೋಪಯೋಗಿ ಇಲಾಖೆಯ ಕಚೇರಿಗೆ ತೆರಳಿ ಕಚೇರಿ ಬಾಗಿಲೆ ಎದುರು ಪ್ರತಿಭಟಿಸಿ ತಾಲೂಕಿನಲ್ಲಿ ಮಳೆಯಿಂದಾಗಿ ಬಹುತೇಕ ರಸ್ತೆಗಳ ತೆಗ್ಗು ಗುಂಡಿ ಮುಚ್ಚಿದೆ ಇರುವುದರಿಂದ ವಾಹನ ಸವಾರರಿಗೆ, ಪ್ರಿಯಾಣಿಕರಿಗೆ ತುಂಬಾ ತೊಂದರೆ ಉಂಟಾಗಿದ್ದು, ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಇದುವರೆಗೂ ಇಡೀ ಮಣ್ಣು ಹಾಕಿಲ್ಲ ಎಂದು ಪದಾಧಿಕಾರಿಗಳು ಆರೋಪಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಮಳೆಯಿಂದ ಹಾನಿಯಾದ ರೈತರಿಗೆ ಕೂಡಲೆ ಸರ್ಕಾರ ಪರಿಹಾರ ನೀಡಬೇಕು ಕರವೇ ಘಟಕ ಆಗ್ರಹ
