ಸಮರ್ಪಕ ಬೆಳೆ ವಿಮೆಯನ್ನು ವಿಮಾ ಕಂಪನಿಯವರು ರೈತರಿಗೆ ನೀಡಬೇಕು

Spread the love

ಕುಂದಗೋಳ: ಸಮರ್ಪಕವಾಗಿ ಬೆಳೆ ವಿಮೆಯನ್ನು ವಿಮಾ ಕಂಪನಿಯವರು ರೈತರಿಗೆ ನೀಡದೆ ಇರುವುದರಿಂದ ಆತ್ಮಹತ್ಯೆಗೆ ಶರಾಣಾಗುತ್ತಿದ್ದಾರೆ, ಈಗ ಅತೀವೃಷ್ಟಿಯಿಂದ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೆ ಬೆಲೆ ವಿಮೆ ಬೆಳೆ ಪರಿಹಾರ ನೀಡಬೇಕೆಂದು ತಾಲೂಕಿನ ಬರದ್ವಾಡ ಗ್ರಾಮದ ಯುವಕರು ತಹಶೀಲ್ದಾರ ಕಚೇರಿಯ ಶಿರಸ್ಥಾರ ಶಾನಬಾಳರವರಿಗೆ ಶುಕ್ರುವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ಮುತ್ತು ಮಾಡಳ್ಳಿ ಮಾತನಾಡಿ ಸರಕಾರವು ರೈತರಿಗೆ ಬೆಳೆ ಪರಿಹಾರ ಎಕರೆಗೆ 1750 ರೂಪಾಯಿ ನೀಡುತ್ತಿದ್ದು ರೈತರು 1 ಎಕರೆಗೆ ಸುಮಾರು 50 ಸಾವಿರ ರೂಪಾಯಿ ಖಚರ್ು ಮಾಡುತ್ತಾರೆ ರೈತರಿಗೆ 1750 ರೂ ನೀಡುವುದಾರೆ ಬೇಡ ಗೌರವಿತವಾಗಿ 50 ಸಾವಿರ ಪರಿಹಾರ ನೀಡಬೇಕು. ಗ್ರಾಮದ ಪ್ರತಿ ವಾಡರ್ಿನ ರಸ್ತೆಗಳನ್ನು ಸುಧಾರಿಸಬೇಕು,ಮಳೆಗಾಲದಲ್ಲಿ ಸಂಚರಿಸದಂತಾಗಿದೆ ಸುಮಾರು 80 ವರ್ಷಗಳ ಕಾಲ ತೆರಿಗೆ ನೀಡುತ್ತಿದ್ದರು ಸಹ ನಮ್ಮೂರಿಗೆ ಇದುವರೆಗೂ ಅಭಿವೃದ್ದಿ ಕಾರ್ಯಗಳು ಇನ್ನು ಆಗಿಲ್ಲ, ತೆರಿಗೆಯನ್ನು ಪಡೆಯುವುದನ್ನು ನಿಲ್ಲಿಸಿ ಇಲ್ಲವೆ ಅಭಿವೃದ್ದಿ ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಖಾನಾದಾರ ಸಂಶಿ,ಈರಣ್ಣ, ತವಶಿಪ್ಪ ಬಡ್ನಿ, ಸಮೀರ ಪಠಾಣ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

×

📱 Support Us by Subscribing to Chirayu Kannada TV on YouTube!