ಇಂದಿನ ತಾಂತ್ರಿಕ ಯುಗದಲ್ಲಿ ಪರಿಸರ ಅವನತಿಯತ್ತ ಸಾಗುತ್ತಿದ್ದು, ನಾವೆಲ್ಲರೂ ಪರಿಸರವನ್ನ ಸಂರಕ್ಷಿಸಬೇಕಾಗಿದೆ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಜುಟ್ಟಲ ಹೇಳಿದರು.


ಕುಂದಗೋಳ : ಇಂದಿನ ತಾಂತ್ರಿಕ ಯುಗದಲ್ಲಿ ಪರಿಸರ ಅವನತಿಯತ್ತ ಸಾಗುತ್ತಿದ್ದು, ನಾವೆಲ್ಲರೂ ಪರಿಸರವನ್ನ ಸಂರಕ್ಷಿಸಿ ಮುಂದಿನ ಪೀಳಿಗೆಗೆ ನಿರ್ಮಲವಾದ ಜೀವನ ಮತ್ತು ಆರೋಗ್ಯ ನೀಡುವುದು ಅನಿವಾರ್ಯವಾಗಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಶೇಖರ ಜುಟ್ಟಲ ಹೇಳಿದರು.
ಅವರು ತಾಲೂಕಿನ ಕಮಡೊಳ್ಳಿ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನರಾಷ್ಟ್ರೀಯಲ್ಲಿ ಜರುಗಿದ ಸೇವಾ ಯೋಜನೆ ಘಟಕ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಮಾತನಾಡಿ ಮನೆಗೂಂದು ಮರ ಊರಿಗೂಂದು ವನ ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಅಶೋಕ ಕಬ್ಬೇರ ವಹಿಸಿ ಮಾತನಾಡಿ ಪರಿಸರದ ರಕ್ಷಣೆ ಮತ್ತು ಮಹತ್ವದ ಬಗ್ಗೆ ತಿಳಿ ಹೇಳಿ, ಅರಣ್ಯ ಇಲಾಖೆಯ ವತಿಯಿಂದ ಸಂಸ್ಥೆಯಲ್ಲಿ ಎರಡು ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕ್ರಮ ಕೈಗೊಂಡಿದ್ದು ಸಸಿಗಳನ್ನು ಸಂರಕ್ಷಿಸಿ ಬೆಳೆಸುವದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯ ಮುಖಂಡರಾದ ಹನಮಂತಗೌಡ ಪಾಟೀಲ, ಪಿರಾಜಿ ಖಂಡೇಕರ, ಗ್ರಾಮ ಪಂಚಾಯತ್ ಅಧ್ಯಕ್ಷ ಸಕ್ಕೂಬಾಯಿ ರೋಡೆ, ಭೂ ನ್ಯಾಯ ಮಂಡಳಿಯ ಸದಸ್ಯ ಶಂಭಯ್ಯ ನಿರಲಗಿ ,ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶಂಕರಗೌಡ ಪಾಟೀಲ ,ಗ್ರಾಮಸ್ಥರಾದ ಶಂಬಾಜಿ ಚವ್ಹಾಣ, ಜಗದೀಶ್ ಹಣಗಿ, ಮಹೇಶ ಕಣಕಣ್ಣವರ, ಗುರುಸಿದ್ದಪ್ಪ ಬರದೇಲಿ, ವಿ.ಸಿ.ತೋಟದ,
ಉಪನ್ಯಾಸಕರಾದ ಇ.ಎಮ್ .ಮಿರ್ಜಿ, ರಾಜೇಶ್ವರಿ ಖಂಡೇಕರ,ಶುಭಂ ಗೌಡರ, ಸಿದ್ದನಗೌಡ ಪಾಟೀಲ್, ಅಂಜುಮ ಮುರುಗೋಡ್, ರಾಹುಲ್ ವರ್ಣೇಕರ್, ಲಕ್ಷ್ಮಿ ಅಸುಂಡಿ, ರಾಜಶೇಖರ್ ರೊಟ್ಟಿಗವಾಡ ಆಗಮಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರ ಅಕ್ಷತಾ ಜನ್ನು ನಿರೂಪಿಸಿದರು, ಎಲೆಕ್ಟ್ರಾನಿಕ್ಸ್ ವಿಭಾಗದ ಸಿದ್ದನಗೌಡ ಪಾಟೀಲ ಸ್ವಾಗತಿಸಿದರು,ಎಲೆಕ್ಟ್ರಾನಿಕ್ಸ್ ವಿಭಾಗದ ಮುಕ್ತಾರಾಣಿ ಹಾಲವರ ಇವರು ವಂದಿಸಿದ
